ಪ್ರೊಫೆಸರ್ ರಾಮಕೃಷ್ಣ ವಿಜಯಾಚಾರ್ಯ ಹೊಸೂರು(೧೬ ಮೇ ೧೯೫೩) ರವರು ಭಾರತೀಯ ಬಯೋಫಿಸಿಕಲ್ ವಿಜ್ಞಾನಿ . ಇವರು ಪರಮಾಣು ಮ್ಯಾಗ್ನೆಟಿಕ್ ರೆಸೋನೆನ್ಸ್ ಮತ್ತು ಆಣ್ವಿಕ ಬಯೋಫಿಸಿಕ್ಸ್ ಕ್ಷೇತ್ರಗಳಲ್ಲಿನ ಪರಿಣತಿಗೆ ಹೆಸರುವಾಸಿಯಾಗಿದ್ದಾರೆ . ಭಾರತ ಸರಕಾರವು ೨೦೧೪ ರಲ್ಲಿ , ಭಾರತದ ನಾಲ್ಕನೇ ಅತ್ಯುನ್ನತ ಪುರಸ್ಕಾರವಾದ ಪದ್ಮಶ್ರೀ ಪ್ರಶಸ್ತಿಯನ್ನು ಹೊಸೂರವರ ವಿಜ್ಞಾನ ಮತ್ತು ತಂತ್ರಜ್ಞಾನದ ಕ್ಷೇತ್ರಗಳಿಗೆ ನೀಡಿದ ಕೊಡುಗೆಗಳಿಗಾಗಿ ನೀಡಿ ಗೌರವಿಸಲಾಯಿತು. == ಜನನ == ರಾಮಕೃಷ್ಣ ವಿ. ಹೊಸೂರು ರವರು ೧೬ ಮೇ ೧೯೫೩ ರಂದು ದಕ್ಷಿಣ ಭಾರತದ ಕರ್ನಾಟಕ ರಾಜ್ಯದಲ್ಲಿ ಜನಿಸಿದರು . == ಶಿಕ್ಷಣ == ರಾಮಕೃಷ್ಣ ವಿಜಯಾಚಾರ್ಯ ಹೊಸೂರು ರವರು ಕರ್ನಾಟಕ ವಿಶ್ವವಿದ್ಯಾಲಯದಿಂದ ೫ ನೇ ಶ್ರೇಯಾಂಕವನ್ನು ಪಡೆದು ರಸಾಯನಶಾಸ್ತ್ರ , ಭೌತಶಾಸ್ತ್ರ ಮತ್ತು ಗಣಿತದಂತಹ ಐಚ್ಛಿಕ ವಿಷಯಗಳಲ್ಲಿ ಪದವಿಯನ್ನು ಪಡೆದರು . ಭಾರತೀಯ ತಂತ್ರಜ್ಞಾನ ಸಂಸ್ಥೆ , ಮುಂಬೈ ( ಐಐಟಿ - ಬಿ) ನಿಂದ ರಸಾಯನಶಾಸ್ತ್ರದಲ್ಲಿ ಎಂಎಸ್ಸಿ ಮಾಡಿದರು . ೧೯೭೮ ರಲ್ಲಿ ಮುಂಬೈನ ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ (ಟಿಐಎಫ್ಆರ್) ನಿಂದ ಪಿಎಚ್ಡಿ ಪದವಿಯನ್ನು ಪಡೆದರು . == ವೃತ್ತಿಜೀವನ == ಹೊಸೂರು ರವರು ಆಗಸ್ಟ್ ೧೯೭೮ ರಲ್ಲಿ ಟಿಐಎಫ್ಆರ್ ನಲ್ಲಿ ಸೇರ್ಪಡೆಯಾಗುವ ಮೂಲಕ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು . ೧೯೮೬ ರಲ್ಲಿ , ಅವರು ರೀಡರ್ನ ಹುದ್ದೆಗೆ ಟಿಐಎಫ್ಆರ್ ಅನ್ನು ಸೇರಿಕೊಂಡರು . ಐದು ವರ್ಷಗಳ ನಂತರ , ಅವರು ಅಸೋಸಿಯೇಟ್ ಪ್ರಾಧ್ಯಾಪಕರಾಗಿ ಮತ್ತು ೧೯೯೬ ರಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡಿದರು . ಅವರು ೨೦೦೩ ರಿಂದ ರಾಸಾಯನಿಕ ವಿಜ್ಞಾನ ಇಲಾಖೆಯಲ್ಲಿ ಟಾಟಾ ಇನ್ಸ್ಟಿಟ್ಯೂಟ್ ನ ಹಿರಿಯ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ . ಇವರು ೨೦೦೨ ರಿಂದ ೨೦೦೪ ರವರೆಗೆ ಇನ್ಸ್ಟಿಟ್ಯೂಟ್ ನ ವಿಜಿಲೆನ್ಸ್ ಅಧಿಕಾರಿ ಆಗಿದ್ದರು ಮತ್ತು ೨೦೦೨ ರಿಂದ ಇಲ್ಲಿಯವರೆಗೂ ಹೈ ಫೀಲ್ಡ್ ನ್ಯೂಕ್ಲಿಯರ್ ಮ್ಯಾಗ್ನೆಟಿಕ್ ರೆಸೊನೆನ್ಸ್ ನ ರಾಷ್ಟ್ರೀಯ ಸೌಲಭ್ಯಕ್ಕಾಗಿ ಸಂಚಾಲಕರಾಗಿದ್ದಾರೆ . ರಾಮಕೃಷ್ಣ ಹೊಸೂರು ರವರು ಮದುವೆಯಾಗಿದ್ದು , ಇಬ್ಬರು ಮಕ್ಕಳಿದ್ದಾರೆ ಮತ್ತು ಅವರ ಕುಟುಂಬವು ಮುಂಬೈನಲ್ಲಿ ವಾಸ ಮಾಡುತ್ತಿದ್ದಾರೆ . == ಸಂಶೋಧನಾ ವಿಭಾಗಗಳು == ಮಾಲಿಕ್ಯೂಲರ್ ಬಯೋಫಿಸಿಕ್ಸ್ . ಸ್ಟ್ರಕ್ಚರಲ್ ಬಯಾಲಜಿ . ಬಯೋಮಾಲಿಕ್ಯೂಲರ್ ಎನ್ಎಂಆರ್ . ಬಯೋಫಿಸಿಕಲ್ ಕೆಮಿಸ್ಟ್ರಿ ‌. == ಪಬ್ಲಿಕೇಷನ್ಸ್ == ಲೇಖನಗಳು: ೨೦೫ (ನಿಯತಕಾಲಿಕಗಳು :೧೬೭ , ಪುಸ್ತಕ ಲೇಖನಗಳು : ೯ , ಸಮಾವೇಶದ ಪ್ರಕ್ರಿಯೆಗಳು : ೨೭ , ಜನಪ್ರಿಯ : ೨) . ಪುಸ್ತಕಗಳು : ೩ (೧ ಲಿಖಿತ ಮತ್ತು ೨ ಸಂಪಾದಿತ) . ಪುಸ್ತಕ ವಿಮರ್ಶೆಗಳು: ೩ . ತಾಂತ್ರಿಕ ವರದಿಗಳು: ೩ . == ಪ್ರಶಸ್ತಿಗಳು == ಯಂಗ್ ಸೈಂಟಿಸ್ಟ್ ಅವಾರ್ಡ್ , ಬ್ರೂಕರ್ ಕಾರ್ಪೊರೇಶನ್ - ೧೯೮೩ . ಯಂಗ್ ಸೈಂಟಿಸ್ಟ್ ಮೆಡಲ್ , ಇಂಡಿಯನ್ ನ್ಯಾಷನಲ್ ಸೈನ್ಸ್ ಅಕಾಡೆಮಿ - ೧೯೮೪. ಬಾಂಬೆ ವಿಶ್ವವಿದ್ಯಾಲಯದ ಬಿ.ಡಿ.ತಿಲಕ್ ಲೆಕ್ಚರ್ ಪ್ರಶಸ್ತಿ - ೧೯೮೯ . ಬಿ.ಎಮ್.ಬಿರ್ಲಾ ಪ್ರಶಸ್ತಿ , ಬಿರ್ಲಾ ಸೈನ್ಸ್ ಸೆಂಟರ್ - ೧೯೯೨ . ಕ್ಯಾನ್ಸರ್ ರಿಸರ್ಚ್ ಸೊಸೈಟಿಯ ೩ ನೇ ವಾರ್ಷಿಕ ಪ್ರಶಸ್ತಿ - ೧೯೯೮ . ಇಂಡಿಯನ್ ನ್ಯಾಷನಲ್ ಸೈನ್ಸ್ ಅಕಾಡೆಮಿ ಯಿಂದ ಆರ್.ಕೆ.ಅಸುಂಡಿ ಲೆಕ್ಚರ್ ಪ್ರಶಸ್ತಿ - ೧೯೯೮ ‌. ಇಂಡಿಯನ್ ನ್ಯಾಷನಲ್ ಸೈನ್ಸ್ ಅಕಾಡೆಮಿಯಿಂದ ಡಾ.ಜಗದೀಶ್ ಶಂಕರ್ ಲೆಕ್ಚರ್ ಪ್ರಶಸ್ತಿ - ೨೦೦೩. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಕೆಮಿಕಲ್ ಬಯಾಲಜಿ ಯಿಂದ ಐಐಸಿಬಿ ಫೌಂಡೇಶನ್ ಡೇ ಲೆಕ್ಚರ್ ಅವಾರ್ಡ್ - ೨೦೦೪. ತ್ರಿವೇಂಡ್ರಮ್ ನ ಪ್ರಾದೇಶಿಕ ಸಂಶೋಧನಾ ಪ್ರಯೋಗಾಲಯದ ಆರ್.ಆರ್.ಎಲ್. ಫೌಂಡೇಷನ್ ಡೇ ಅವಾರ್ಡ್ - ೨೦೦೬ . ಜೆ.ಸಿ.ಬೋಸ್ ನ್ಯಾಷನಲ್ ಫೆಲೋಶಿಪ್ , ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ , ಭಾರತ ಸರಕಾರ - ೨೦೦೭ . ಇಂಡಿಯನ್ ಕೆಮಿಕಲ್ ಸೊಸೈಟಿಯ , ಪಾದ್ರಿ ಯಡ್ಡನಪಳ್ಳಿ ಮೆಮೊರಿಯಲ್ ಲೆಕ್ಚರ್ ಅವಾರ್ಡ್ - ೨೦೦೯. ಪ್ರೊ.ಜಿ.ಎನ್.ರಾಮಚಂದ್ರನ್ ಚಿನ್ನದ ಪದಕ - ಕೌನ್ಸಿಲ್ ಫಾರ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ - ೨೦೦೯. ಆಚಾರ್ಯ ಪ್ರಫುಲ್ಲಾ ಚಂದ್ರ ರೈ ಸ್ಮಾರಕ ಪ್ರಶಸ್ತಿ , ಇಂಡಿಯನ್ ಕೆಮಿಕಲ್ ಸೊಸೈಟಿ - ೨೦೧೧ . ಪದ್ಮಶ್ರೀ ಪುರಸ್ಕಾರ - ೨೦೧೪ . == ಉಲ್ಲೇಖಗಳು ==